Thursday, November 21, 2013

Home remedies for Stomach Warms (ಜಂತು ಹುಳು)



ಸೇಬನ್ನು  ರಾತ್ರಿಯ  ಹೊತ್ತು  ಹಲವು  ದಿನಗಳವರೆಗೆ  ಸೇವಿಸಿದರೆ  ಹೊಟ್ಟೆಯಲ್ಲಿರುವ  ಜಂತುಗಳು  ಮಲದ  ಜೊತೆ  ಹೊರಹೋಗುತ್ತವೆ. 

ಒಣಗಿದ  ಮಾವಿನ  ಬೀಜದ  ಪುಡಿಯನ್ನು  ಜೇನುತುಪ್ಪದೊಂದಿಗೆ  ಸೇವಿಸಿದರೆ  ಮಕ್ಕಳ  ಹೊಟ್ಟೆಯಲ್ಲಿ   ಬೆಳೆಯುವ  ಜಂತುಗಳು  ಸಾಯುವುವು.

ಪರಂಗಿ (ಪಪ್ಪಾಯ) ಕಾಯಿಯ  ರಸವನ್ನು  ಜೇನುತುಪ್ಪದೊಂದಿಗೆ  ಬಿಸಿನೀರಿನಲ್ಲಿ  ಬೆರೆಸಿ  ಕುಡಿಸುವುದರಿಂದ  ಮಕ್ಕಳಿಗೆ  ಹೊಟ್ಟೆಯಲ್ಲಿ  ಜಂತು ಹುಳುಗಲಿದ್ದರೆ  ಸತ್ತು  ಮಲದ  ಮೂಲಕ  ಹೊರಬರುತ್ತವೆ.

ಪರಂಗಿ  ಹಣ್ಣಿನ  ಬೀಜಗಳನ್ನು  ಜೇನುತುಪ್ಪದೊಂದಿಗೆ  ತಿನ್ನಿಸುವುದರಿಂದ  ಮಕ್ಕಳ  ಹೊಟ್ಟೆಯಲ್ಲಿರುವ  ಜಂತು ಹುಳುಗಳು  ಮಲದ  ಮೂಲಕ  ಹೊರಬರುತ್ತವೆ.

ಪರಂಗಿ ಹಣ್ಣನ್ನು ೩-೪  ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಜಂತು ಹುಳುಗಳು ಸಾಯುತ್ತವೆ.

 ಬೀವಿನ ಸೊಪ್ಪು, ಕೊತ್ತಂಬರಿ, ಶುಂಠಿ, ಮೆಣಸಿನ ಕಾಯಿ, ಉಪ್ಪು ಮತ್ತು ಹುಣಸೇ ಹಣ್ಣನ್ನು ಬೆರೆಸಿ, ಅರೆದು ವಾರಕ್ಕೊಮ್ಮೆ ಅದನ್ನು ಬಿಸಿ ಅನ್ನಕ್ಕೆ ಕಲೆಸಿ ತಿನ್ನುತ್ತಾ ಬಂದರೆ ಹೊಟ್ಟೆಯಲ್ಲಿರುವ ಜಂತು ಹುಳು ನಾಶವಾಗುತ್ತದೆ. 

ಕಲ್ಲಂಗಡಿ  ಹಣ್ಣಿನ  ಬೀಜದ  ತಿರುಳನ್ನು  ತಿನ್ನುವುದರಿಂದ  ಹೊಟ್ಟೆಯಲ್ಲಿರುವ  ಜಂತು  ನಾಶವಾಗುತ್ತದೆ.

No comments:

Post a Comment