Sunday, November 17, 2013

Blood purifiers ರಕ್ತ ವೃದ್ದಿ ಮತ್ತು ರಕ್ತ ಶುದ್ಧಿ



* 20-25 ಒಣದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಅದನ್ನು ತಿಂದು ಅದೇ ನೀರನ್ನು ಕುಡಿದರೆ ರಕ್ತ ವರ್ಧನೆ ಆಗುತ್ತದೆ. ಇಂದ್ರಿಯ ದೌರ್ಬಲ್ಯ ಗುಣವಾಗುತ್ತದೆ.

* 5-6 ಅಂಜೂರದ ಹಣ್ಣೂಗಳನ್ನು ಒಣದ್ರಾಕ್ಷಿಗಳೊಂದಿಗೆ 1 ಕಪ್ ಹಾಲಿನಲ್ಲಿ ಹಾಕಿ ಬೇಯಿಸಿ, ಈ ಹಾಲನ್ನು ಕುಡಿಯುವುದರಿಂದ ರಕ್ತ ಶುದ್ಧಿಯಾಗಿ ರಕ್ತ ವೃದ್ದಿಯಾಗುತ್ತದೆ.

* ಕರಬೂಜ ಹಣ್ಣು ತಂಪು ಗುಣವನ್ನು ಹೊಂದಿದ್ದು ರಕ್ತವನ್ನು ಶೋಧಿಸುತ್ತದೆ.

* ದಾಳಿಂಬೆ ಹಣ್ಣಿನ ರಸ ರಕ್ತವರ್ಧಕ. ಇದರ ಸೇವನೆಯಿಂದ ರಕ್ತ ಸಂಚಾರ ಸುಗಮವಾಗುತ್ತದೆ.

* ½ ಲೋಟ ಬಾಳೆಯ ದಿಂಡಿನ ರಸವನ್ನು ದಿನವೂ ಸೇವಿಸುವುದರಿಂದ ಅಧಿಕ ರಕ್ತದೊತ್ತಡ (HBP) ಕಡಿಮೆ ಆಗುತ್ತದೆ.

* ಬಾದಾಮಿಯನ್ನು ರಾತ್ರಿ ನೆನೆಸಿ ಮರುದಿನ ಬೆಳಗ್ಗೆ ಸಿಪ್ಪೆ ತೆಗೆದು ಅರೆಯಬೇಕು. ಅದನ್ನು ಹಾಲಲ್ಲಿ ಬೆರೆಸಿ ಪ್ರತಿದಿನ ಕುಡಿದರೆ ದೇಹಬಲ, ರಕ್ತ ವರ್ಧಿಸುತ್ತದೆ.

* ರಾತ್ರಿ 5-6 ಹನಿ ಬಾದಾಮಿ ತೈಲವನ್ನು ಮೂಗಿಗೆ ಹಾಕಿದರೆ ರಕ್ತದೊತ್ತಡ (BP) ಕಡಿಮೆ ಆಗುತ್ತದೆ.

* ಬೋರಹಣ್ಣಿನ ನಿಯಮಿತವಾದ ಸೇವನೆಯಿಂದ ರಕ್ತವು ಶುದ್ಧವಾಗುತ್ತದೆ.

* ಮೊಸಂಬಿ ಸೇವನೆಯಿಂದ ರಕ್ತನಾಳದ ಕೊಬ್ಬು ನಿವಾರಣೆಯಾಗಿ ಶರೀರದಲ್ಲಿನ ರಕ್ತ ಸಂಚಾರ ಸುಗಮವಾಗುತ್ತದೆ.

* ಸಪೋಟ ಹಣ್ಣನ್ನು ದಿನನಿತ್ಯ ಸೇವಿಸಿದರೆ ದೇಹಕ್ಕೆ ತಂಪು ಮತ್ತು ರಕ್ತ ವೃದ್ದಿಯಾಗುತ್ತದೆ.

No comments:

Post a Comment