Thursday, September 19, 2013

ಬೇಧಿ (Loose motion)



ಬೇಧಿ:


ನೇರಳೆ ಹಣ್ಣಿನ ಮರದ ತೊಗಟೆಯ ರಸ ತೆಗೆದು ಆಡಿನ (ಕುರಿ) ಹಾಲಿನ ಜೊತೆಗೆ ಸೇವಿಸುತ್ತಾ ಬಂದರೆ ಎಂಥಹ 
ಅತಿಸಾರವಾದರೂ ಗುಣವಾಗುತ್ತೆ.

ಸೀಬೆ ಗಿಡದ ಎಲೆಗಳ ಕಷಾಯ ಉದರದ ತೊಂದರೆಗಳನ್ನು ನಿವಾರಿಸುತ್ತದೆ. ಅಜೀರ್ಣ, ವಾಂತಿ, ಬೇಧಿ ಮುಂತಾದ 
ತೊಂದರೆಗಳು ನಿವಾರಣೆಯಾಗುತ್ತವೆ.


ಜ್ವರ ಹಾಗೂ ಬೇಧಿ ಸಂದರ್ಭಗಳಲ್ಲಿ ಹಲಸಿನ ಬೇರಿನ ಕಷಾಯವನ್ನು ಸೇವಿಸಬಹುದು.

ಸ್ವಲ್ಪ ಹುಣಸೆ ಹಣ್ಣಿಗೆ ಅಷ್ಟೆ ಪ್ರಮಾಣದ ಬೆಲ್ಲ, 1 ಟೀ ಚಮಚ ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಕುಟ್ಟಿ ಮುದ್ದೆ ಮಾಡಿ, 


ಬಾಯಲ್ಲಿರಿಸಿ ಚಪ್ಪರಿಸುತ್ತಿದ್ದರೆ ಹೊಟ್ಟೆ ತೊಲಸು, ತಲೆಸುತ್ತು, ವಾಂತಿ, ವಾಕರಿಕೆಯಂತಹ ಪಿತ್ತ ವಿಕಾರಗಳು ಹೋಗುತ್ತವೆ.


ಮಕ್ಕಳಿಗೆ ಬೇಧಿ ಹಿಡಿದರೆ ಕಿತ್ತಳೆ ಹಣ್ಣಿನ ರಸವನ್ನು ಹಾಲಿನ ಜೊತೆ ಬೆರೆಸಿ ಕುಡಿಸಿದರೆ ಗುಣವಾಗುತ್ತದೆ.

ಬಸ್ಸಿನಲ್ಲಿ ಓಡಾಡುವಾಗ ವಾಂತಿ ಬರುವ ವ್ಯಕ್ತಿಗಳು ಕಿತ್ತಳೆ ಹಣ್ಣನ್ನು ಮೂಸಿ ನೋಡುವುದರಿಂದ ವಾಂತಿಯಾಗುವುದು 
ತಪ್ಪುತ್ತದೆ.

ಆಹಾರ ಸೇವಿಸಿದ ನಂತರ ಹೊಟ್ಟೆ ಉರಿಯುವುದು ಮತ್ತು ಹಳದಿಯಾಗಿ ವಾಂತಿ ಆಗುತ್ತಿದ್ದರೆ, ಬೆಳಗ್ಗೆ ಬರಿ (ಖಾಲಿ) 
ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದಿಷ್ಟು ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು.

ಕರಬೂಜದ ಹಣ್ಣನ್ನು ತಿಂದು ಹಾಲು ಕುಡಿಯಬಾರದು. ಇದರಿಂದ ಅತಿಸಾರ ಬೇಧಿ ಆಗುವ ಸಾಧ್ಯತೆ ಇದೆ.

ದಾಳಿಂಬೆ ಹಣ್ಣಿನ ಬೀಜಗಳನ್ನು ಅರೆದು ನೀರಿನೊಂದಿಗೆ ಕುಡಿದರೆ ಆಮಶಂಕೆ ಗುಣವಾಗುತ್ತದೆ.

ದಾಳಿಂಬೆ ಹಣ್ಣಿನ ಸಿಪ್ಪೆಯ ಕಷಾಯವನ್ನು ಕುಡಿದರೆ ಬೇಧಿ ಮತ್ತು ರಕ್ತ ಬೇಧಿ ಕಡಿಮೆಯಾಗುತ್ತದೆ.


ಪರಂಗಿ ಕಾಯಿಯನ್ನು ಬೇಯಿಸಿ ತಿನ್ನುವುದರಿಂದ ಬೇಧಿ ಗುಣವಾಗುತ್ತದೆ.


ರಕ್ತ ಬೇಧಿ, ಉಷ್ಣ ಬೇಧಿ ಇರುವಾಗ ಟೀ ಸೊಪ್ಪಿನ ಕಷಾಯದಲ್ಲಿ ಬಾಳೆಹಣ್ಣನು ಬೆರೆಸಿ, ಸೇವಿಸಿದರೆ ಬೇಧಿ ನಿಯಂತ್ರಣಕ್ಕೆ 
ಬರುತ್ತದೆ.


ಭೋರೆಹಣ್ಣುಗಳ ಸೇವನೆಯಿಂದ ಬೇಧಿ ಮತ್ತು ರಕ್ತ ಬೇಧಿ ನಿಲ್ಲುತ್ತದೆ.


ಬೇಯಿಸಿದ ಮಾವಿನ ಹಣ್ಣಿನ ಗೊರಟೆಯ ಚೂರ್ಣವನ್ನು ಮಾಡಿ, ಜೇನುತುಪ್ಪದೊಡನೆ ಮಕ್ಕಳಿಗೆ ನೆಕ್ಕಿಸಿದರೆ ಅವರ 
ಅತಿಸಾರ ದೂರವಾಗುತ್ತದೆ.


ಮಾವಿನ ಗೊರಟೆಯ ಚೂರ್ಣವನ್ನು 2ಗ್ರಾಂನಷ್ಟು ಸೇವಿಸುವುದರಿಂದ ರಕ್ತ ಬೇಧಿ ನಿಲ್ಲುತ್ತದೆ.


ಹಾಲು ಕುಡಿಯುವ ಮಗುವಿಗೆ ಬೇಧಿಯಾದರೆ ಹಾಲು ಕೊಡುವುದನ್ನು ನಿಲ್ಲಿಸಿ, ಬಿಸಿನೀರಿನಲ್ಲಿ ಕುದಿಸಿ ಕುವುಚಿದ ಸೇಬು 

ಹಣ್ಣಿನ (ಸಿಪ್ಪೆ ತೆಗೆದು) ರಸ ಕುಡಿಸಬೇಕು. ಬೇಧಿ ಕಡಿಮೆ ಆಗುತ್ತದೆ.

No comments:

Post a Comment