Wednesday, September 11, 2013

Home Remedies for Kura (ಕುರ)






1.ಟೊಮ್ಯಾಟೋ ಹಣ್ಣಿನ ರಸಕ್ಕೆ ಚಿಟಿಕೆ ಉಪ್ಪು ಮತ್ತು ಮೆಣಸಿನ ಕಾಳನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರನಕೆ ಬರುತ್ತದೆ.

2.ಬೇವಿನ ಎಲೆ ಮತ್ತು ಅರಿಶಿನ ಪುಡಿಯ ಪೇಸ್ಟ್ ತಯಾರಿಸಿ ಬಾಧಿತ ಭಾಗಕ್ಕೆ ಲೇಪಿಸುವದರಿಂದ ಪರಿಣಾಮಕಾರಿ ಫಲಿತಾಂಶ ದೊರೆಯುವದು.

3.ಉದ್ದಿನ ಬೆಲೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನಿನ್ನಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ . ಮರುದಿನ ನಿಮ್ಮ ಕುರ  ಬೆಳೆದು ಒಡೆದುಬಿಡುತ್ತದೆ. ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಅಗೋಚರ.


4.ನೀರನ್ನು ಒಲೆಯಮೇಲಿಟ್ಟು ಅದು ಕುದಿಯುವಾಗ ಅದಕ್ಕೆರಾಗಿಹಿಟ್ಟು / ಮೆಂತೆಯ ಹಿಟ್ಟು ಮತ್ತು ಅರಿಶಿನ ಸೇರಿಸಿ ತಿರುವಿ ಅದು ಗಟ್ಟಿಯಾದ ಕೂಡಲೇ ಅದನ್ನು ಬಟ್ಟೆಯ ಮೇಲೆ ಸವರಿ ಸಹನೆಯಾಗುವಷ್ಟು ಬಿಸಿಯಾಗಿರುವಾಗ ಕುರದ ಮೇಲೆ ಲೇಪಿಸಬೇಕು. 

5.ದಾಸವಾಳದ  ಎಲೆಗಳನ್ನು  ಅಕ್ಕಿಯೊಂದಿಗೆ  ಅರೆದು   ದೋಸೆ  ಮಾಡಿ ತಿನ್ನಬೇಕು ,

6. ೩ ದಿವಸ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ  ೧ ಸ್ಪೂನ್  ತುಪ್ಪ  ೧ ಸ್ಪೂನ್  ಸಕ್ಕರೆ  ಬೆರೆಸಿ  ತಿಂದರು  ಕಡಿಮೆ  ಆಗುತ್ತೆ.

7. ಬಾಳೆ ದಿಂಡಿನ ಪಲ್ಯ  ಮಾಡಿ  ತಿನ್ನಬೇಕು.

8. ಕುರಕ್ಕೆ  ಬೆಣ್ಣೆ  ಹಚ್ಚಿ  ಬಿಸಿ  ನೀರಲ್ಲಿ  ಬಟ್ಟೆ  ಅಡ್ಡಿ  ಕುರಕ್ಕೆ  ಶಾಖ  ಕೊಡುವುದರಿಂದ  ಬೇಗ  ಹಣ್ಣಾಗಿ  ಒಡೆಯುತ್ತೆ.

9.ಕುರಕ್ಕೆ  ಪ್ಯೂರ್  ಕುಂಕುಮವನ್ನು  ಬೆಣ್ಣೆಯ  ಜೊತೆಯಲ್ಲಿ  ಮಿಕ್ಸ್  ಮಾಡಿ  ಹಚ್ಚಿದರೆ  ಕುರು  ಒಡೆದು   ಕಡಿಮೆಯಾಗುವದು.

10.ತೊಂಡೆ  ಎಳೆಯನ್ನು  ಅಥವಾ  ವೀಳ್ಯದ  ಎಳೆಯನ್ನು  ಸ್ವಲ್ಪ  ಬಿಸಿ  ಮಾಡಿ  ಕಟ್ಟಿದರೆ  ಕಡಿಮೆಯಾಗಿತ್ತದೆ.

11.ಬೂರಲ ಮರದ  ಚಕ್ಕೆಯನ್ನು  ನೀರಲ್ಲಿ  ತೇಯ್ದು  ಹಚ್ಚಿದರೂ  ಕಡಿಮೆಯಾಗುವದು.

12.ಶಂಖವನ್ನು ಲಿಂಬೆರಸದಲ್ಲಿ ತೇದು ಹಚ್ಚಿದರೆ ಕುರ ಒಡೆದುಮಾಯುತ್ತದೆ.

13.ಆಗತಾನೇ ಏಳುತ್ತಿರುವ ಕುರಕ್ಕೆ ಶುದ್ಧ ಜೇನುತುಪ್ಪವನ್ನುಹತ್ತಿಯಲ್ಲಿ ಅದ್ದಿ ಕುರದ ಮೇಲಿರಿಸುವುದು. ಇದು ಎಲ್ಲ ಬಾವುಗಳ ಮೇಲೂಉಪಯೋಗವಾಗುತ್ತದೆ.

No comments:

Post a Comment