Saturday, July 07, 2012

Home remedies for Asthma (ಅಸ್ತಮಾಗೆ ಮನೆಯಲ್ಲೇ ಮದ್ದು )






ಅಸ್ತಮಾಗೆ ಮನೆಯಲ್ಲೇ ಮದ್ದು

1. ಜೇನನ್ನು ಅಸ್ತಮಾಗೆ ಉತ್ತಮ ಮನೆಮದ್ದಾಗಿ ಉಪಯೋಗಿಸಲಾಗುತ್ತೆ. ಅಸ್ತಮಾ ಕಾಣಿಸಿಕೊಂಡಾಗ ಬಿಸಿ ನೀರಿನಲ್ಲಿ ಜೇನನ್ನು ಹಾಕಿ ಅದರ ಆವಿಯನ್ನು ತೆಗೆದುಕೊಂಡರೆ ಬೇಗನೆ ಪರಿಣಾಮ ಬೀರುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಜೇನು ಬೆರೆಸಿ ಅದನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಅಸ್ತಮಾ ನಿಯಂತ್ರಿಸಬಹುದು.
2. ಒಂದು ಕಪ್ ತುರಿದ ಮೂಲಂಗಿ, ಒಂದು ಚಮಚ ಜೇನು ಮತ್ತು ಒಂದು ಚಮಚ ನಿಂಬೆರಸ ಸೇರಿಸಿ 20 ನಿಮಿಷ ಕಾಯಿಸಿ ಇದನ್ನು ದಿನವೂ ಒಂದು ಚಮಚ ಸೇವಿಸುತ್ತಾ ಬಂದರೆ ಪರಿಣಾಮಕಾರಿಯಾಗಿ ಅಸ್ತಮಾ ನಿವಾರಿಸುತ್ತೆ.

...
3. ನಾಲ್ಕು ಅಂಜೂರದ ಹಣ್ಣನ್ನು ಬೆಚ್ಚಗಿನ ನೀರಿನಲ್ಲಿ ಒಂದು ರಾತ್ರಿ ನೆನೆಸಿಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಅಸ್ತಮಾ ಬರುವ ಪ್ರಮಾಣ ಕಡಿಮೆಗೊಳಿಸಬಹುದು.

4. ಹಾಗಲಕಾಯಿ ಅಸ್ತಮಾಗೆ ಮತ್ತೊಂದು ಪರಿಣಾಮಕಾರಿ ಮದ್ದು. ಜೇನಿನೊಂದಿಗೆ ಹಾಗಲಕಾಯಿ ಪೇಸ್ಟ್, ತುಳಸಿ ಎಲೆ ರಸ ಸೇರಿಸಿ ಕುಡಿಯುವುದರಿಂದ ಅಲರ್ಜಿ ನಿವಾರಿಸಿ ಅಸ್ತಮಾ ಬರುವುದನ್ನೂ ತಡೆಗಟ್ಟುತ್ತದೆ.

5. ಮೆಂತ್ಯೆ ಕಾಳಿನಲ್ಲಿ ಅಲರ್ಜಿ ನಿವಾರಿಸಬಲ್ಲ ಶಕ್ತಿಯಿದೆ. ನೀರಿನೊಂದಿಗೆ ಮಂತ್ಯೆ ಕಾಳು ಬೇಯಿಸಿ ಅದಕ್ಕೆ ಒಂದು ಚಮಚ ಜೇನು ಮತ್ತು ಶುಂಠಿ ರಸದೊಂದಿಗೆ ಬೆರೆಸಿ ದಿನಕ್ಕೊಮ್ಮೆ ಸೇವಿಸಿದರೆ ಚಳಿಗಾಲದಲ್ಲಿ ಅಸ್ತಮಾ ಕಡಿಮೆಮಾಡಬಹುದು.

No comments:

Post a Comment