Saturday, July 07, 2012

Health benifits of Black Grapes (ಕಪ್ಪು ದ್ರಾಕ್ಷಿ )





ಕಪ್ಪು ದ್ರಾಕ್ಷಿ ಬಯಸುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಕಪ್ಪು ದ್ರಾಕ್ಷಿ ಸೇವನೆಯಿಂದ ದೇಹದ ಬೊಜ್ಜು ಕರಗಿಸಿ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಮಿಚಿಗನ್ ಯೂನಿವರ್ಸಿಟಿ ನಡೆಸಿದ ಅಧ್ಯಯನ ತಿಳಿಸಿಕೊಟ್ಟಿದೆ.

ಒಳ್ಳೆಯ ರುಚಿಯೊಂದಿಗೆ ದೇಹದ ಕೊಬ್ಬನ್ನು ಕರಗಿಸುವ ಸುಲಭ ಮಾರ್ಗ ಇರಬೇಕಾದರೆ ಇನ್ನೇಕೆ ಚಿಂತೆ? ಕಪ್ಪು ದ್ರಾಕ್ಷಿಯಲ್ಲಿರುವ ಅನೇಕ ಉಪಯೋಗಗಳನ್ನು ತಿಳಿದುಕೊಂಡು ನೀವೂ ಪ್ರಯತ್ನಿಸಿ ನೋಡಿ

ಕಪ್ಪು ದ್ರಾಕ್ಷಿಯಲ್ಲಿರುವ 5 ಪ್ರಮುಖ ಉಪಯೋಗಗಳು:
...

* ಈ ದ್ರಾಕ್ಷಿ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದು ಹೃದಯಕ್ಕೆ ಅತಿ ಅವಶ್ಯಕ. ಮತ್ತು ಮಧುಮೇಹವನ್ನು ತಡೆಗಟ್ಟುವಲ್ಲೂ ಇದು ಸಹಕಾರಿ.

* ಕಪ್ಪು ದ್ರಾಕ್ಷಿಯಲ್ಲಿರುವ ಅತಿ ಹೆಚ್ಚು ವಿಟಮಿನ್, ಬಿ ಕಾಂಪ್ಲೆಕ್ಸ್, ತಾಮ್ರಾಂಶ, ಕಬ್ಬಿಣಾಂಶ ಮತ್ತು ಸೆಲೆನಿಯಂ ಅಂಶಗಳುರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರಕ್ತಕ್ಕೆ ಕಬ್ಬಿಣಾಂಶ ನೀಡಿ ದೇಹಕ್ಕೆ ಯಾವುದೇ ಸೋಂಕು ತಗುಲದಂತೆ ತಡೆಯುತ್ತದೆ.

* ಈ ಹಣ್ಣಿನಲ್ಲಿನ ನೀಲಿ ಅಂಶ ದೇಹದಲ್ಲಿನ ಅನೇಕ ಬ್ಯಾಕ್ಟೀರಿಯಾಗಳ ಜೊತೆ ಹೋರಾಡಿ ದೇಹವನ್ನು ಆರೋಗ್ಯವಾಗಿಡುವುದಷ್ಟೇ ಅಲ್ಲ, ಬೇಗನೆ ಚರ್ಮಕ್ಕೆ ಸುಕ್ಕು ಬರುವುದನ್ನೂ ತಡೆಗಟ್ಟುತ್ತದೆ.

* ಕಪ್ಪು ದ್ರಾಕ್ಷಿಯಿಂದ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕರಗಿಸಬಹುದು ಎಂದು ಇತ್ತೀಚೆಗೆ ಇಲಿಯೊಂದರ ಮೇಲೆ ನಡೆದ ಸಂಶೋಧನೆಯಿಂದ ತಿಳಿದುಬಂದಿದೆ. ಪ್ರತಿನಿತ್ಯ ಇದರ ಸೇವನೆ ಅತ್ಯತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.

* ಇಷ್ಟೇ ಅಲ್ಲ, ಕಪ್ಪುದ್ರಾಕ್ಷಿ ಮೂತ್ರ ಸಂಬಂಧಿ ಸೋಂಕುಗಳನ್ನು ತಡೆಗಟ್ಟಿ, ಮೂತ್ರ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಇದಲ್ಲದೆ ಸೋಂಕಿನಿಂದ ಉಂಟಾಗುವ ತುರಿಕೆ, ಉರಿಮೂತ್ರವನ್ನೂ ನಿಗ್ರಹಿಸುವಲ್ಲಿ ಪರಿಣಾಮಕಾರಿ.

No comments:

Post a Comment