Sunday, June 17, 2012

HEALTH BENEFITS OF BITTER GOURD ಹಾಗಲಕಾಯಿ





* ರಕ್ತ ಶುದ್ಧೀಕರಣ: ರಕ್ತಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳನ್ನು ನೀಗಿಸುವಲ್ಲಿ ಹಾಗಲ ಕಾಯಿಯದು ಮೊದಲ ಸ್ಥಾನ. ಕೆಟ್ಟ ರಕ್ತದಿಂದ ಉಂಟಾಗುವ ಹುಣ್ಣು, ಚರ್ಮದ ತುರಿಕೆ ಮತ್ತು ಕೀವು ಸೋರುವುದನ್ನು ತಡೆಯುತ್ತದೆ. ನಿಂಬೆಹಣ್ಣು ಮತ್ತು ಸ್ವಲ್ಪ ಜೇನಿನೊಂದಿಗೆ ಇದನ್ನು ಸೇವಿಸುತ್ತ ಬಂದರೆ ಕ್ರಮೇಣ ರಕ್ತ ಶುದ್ಧಿಯಾಗುತ್ತದೆ.

* ಕಾಲರಾ, ಜಾಂಡೀಸ್ ನಂತಹ ಅಪಾಯಕಾರಿ ರೋಗಗಳ ತಡೆಗೆ ಇದು ರಾಮಬಾಣ. ಅಷ್ಟೇ ಅಲ್ಲ, ಹುಳುಕಡ್ಡಿ ಮುಂತಾದ ಅಲರ್ಜಿ ಸಂಬಂಧಿತ ಕಾಯಿಲೆಗಳನ್ನು ಅತಿ ಬೇಗ ಗುಣಪಡಿಸುತ್ತದೆ.

* ಮಧುಮೇಹ: ಕಹಿಯಾದ ಹಾಗಲಕಾಯಿಯಲ್ಲಿನ ಹೈಪೊಗ್ಲೈಸಮಿಕ್ ಎಂಬ ನೈಸರ್ಗಿಕ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ತಗ್ಗಿಸುವುದಲ್ಲದೆ, ರಕ್ತಕ್ಕೆ ಗ್ಲೂಕೋಸ್ ನೀಡಿ ಸಾಮರ್ಥ್ಯ ಹೆಚ್ಚುವಂತೆ ಮಾಡುತ್ತದೆ.

* ರೋಗ ನಿರೋಧಕ ಶಕ್ತಿ: ಹಾಗಲಕಾಯಿಯಲ್ಲಿನ ಸತ್ವ ರಕ್ತದಲ್ಲಿನ ಕೆಲವು ಸೂಕ್ಷ್ಮಾಣು ಜೀವಿಗಳನ್ನು ಕೊಂದು ಜೀರ್ಣಕ್ರಿಯೆಗೆ ಸ್ಪಂದಿಸುವಂತೆ ಮಾಡುತ್ತದೆ. ಶಕ್ತಿಯ ಮೂಲವಾಗಿರುವ ಈ ಹಾಗಲಕಾಯಿ ರಸವನ್ನು ಸೇವಿಸಿದರೆ ತಲೆ ಸುತ್ತು ಕಡೆಮೆಯಾಗಿ, ದೈಹಿಕ ಚಟುವಟಿಕೆಗಳು ಸರಾಗವಾಗಿ ಸಾಗುವಂತೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

* ಉಸಿರಾಟ ಸಂಬಂಧಿ ಕಾಯಿಲೆಗಳಾದ ಅಸ್ತಮಾ, ಗೂರಲು ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಗೆ ಇದರ ಸೇವನೆ ಅತಿ ಶೀಘ್ರ ಪರಿಣಾಮ ಬೀರುತ್ತದೆ.


*ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತಾಜಾ ಹಾಗಲಕಾಯಿಯು ಶ್ವಾಸಕೋಶ ಸಂಬಂಧಿ ಸಮಸ್ಯೆಗಳಾದ ಆಸ್ತಮಾ, ಶೀತ, ಕೆಮ್ಮು ಮುಂತಾದವುಗಳಿಗೆ ಅತ್ಯುತ್ತಮ ಪರಿಹಾರವಾಗಿದೆ.

* ಯಕೃತ್ ನ ಟಾನಿಕ್ ಯಕೃತ್ ನ ಸಮಸ್ಯೆಗಳನ್ನು ಗುಣಪಡಿಸಲು ಪ್ರತಿದಿನ ಒಂದು ಲೋಟದಷ್ಟು ಹಾಗಲಯಿಯ ಜ್ಯೂಸ್ ನ್ನು ಕುಡಿಯಿರಿ. ಫಲಿತಾಂಶವನ್ನು ಮನಗಾಣಲು ಒಂದು ವಾರದವರೆಗೆ ನಿರಂತರವಾಗಿ ಕುಡಿಯಿರಿ.

* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಸೋಂಕುಗಳ ವಿರುದ್ಧ ಹೋರಾಡಲು, ಹಾಗಲಕಾಯಿ ಗಿಡದ ಎಲೆಗಳನ್ನು ಅಥವಾ ಹಣ್ಣುಗಳನ್ನು ನೀರಿನಲ್ಲಿ ಕುಡಿಸಿ ಪ್ರತಿದಿನ ಸೇವಿಸಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯ ವರ್ಧನೆಗೆ ಸಹಕಾರಿ.

*ಮೊಡವೆಗಳಿಗೆ (acne) ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ 6 ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿಮ್ಮ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.  

* ಮಧುಮೇಹ (Diabetes) Type 2 ಮಧುಮೇಹವನ್ನು ಗುಣಪಡಿಸಲು ಹಾಗಲಕಾಯಿಯ ಜ್ಯೂಸ್ ಅತಿ ಸಾಮಾನ್ಯವಾದ, ಜನಪ್ರಿಯ ಪರಿಹಾರವಾಗಿದೆ. insulin ಗೆ ಸಮನಾದ ಕೆಲವು ರಾಸಾಯನಿಕಗಳು ಹಾಗಲಕಾಯಿಯಲ್ಲಿದ್ದು, ಅವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ.  

* ಮಲಬದ್ಧತೆ (Constipation) ಹಾಗಲಕಾಯಿಯ ನಾರಿನ ಗುಣಗಳು, ಪಚನಕ್ರಿಯೆಯಲ್ಲಿ ಸಹಕಾರಿಯಾಗಿವೆ. ಇದರಿಂದಾಗಿ ಆಹಾರವು ಸುಲಭವಾಗಿ ಪಚನವಾಗುತ್ತದೆ ಹಾಗೂ ತ್ಯಾಜ್ಯವು ಸುಲಲಿತವಾಗಿ ಹೊರಗೆಸೆಯಲ್ಪಡುತ್ತದೆ ಹಾಗೂ ತನ್ಮೂಲಕ ಅಜೀರ್ಣ ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತವೆ.

* ಮೂತ್ರಪಿಂಡ (kidney) ಮತ್ತು ಮೂತ್ರಕೋಶದ ಆರೋಗ್ಯಕ್ಕೆ ಮೂತ್ರಪಿoಡ ಮತ್ತು ಮೂತ್ರಕೋಶಗಳನ್ನು ಆರೋಗ್ಯಪೂರ್ಣವಾಗಿ ಕಾಪಿಟ್ಟುಕೊಳ್ಳಲು, ಹಾಗಳಕಾಯಿಯು ಸಹಕಾರಿ. kidney ಯ ಕಲ್ಲುಗಳ ನಿವಾರಣೆಯಲ್ಲಿಯೂ ಇದು ಉಪಯುಕ್ತ.

* ಹೃದಯ ಸಂಬಂಧೀ ರೋಗಗಳಿಗೆ ಹಾಗಲಕಾಯಿಯು ಹೃದಯದ ಆರೋಗ್ಯಕ್ಕೆ ಹಲವು ವಿಧದಲ್ಲಿ ಅತ್ಯುತ್ತಮವಾಗಿದೆ. ರಕ್ತನಾಳಗಳಲ್ಲಿ ತಡೆಯನ್ನುಂಟು ಮಾಡುವ ಕೆಟ್ಟ ಕೊಲೆಸ್ಟರಾಲ್ (bad cholesterol) ನ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ಹೃದಯಾಘಾತದ ಸಾಧ್ಯತೆಯನ್ನು ಕ್ಷೀಣಗೊಳಿಸುತ್ತದೆ. ಮಾತ್ರವಲ್ಲದೇ, ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನೂ ಸಹ ತಗ್ಗಿಸುವುದರ ಮೂಲಕ ಹೃದಯವನ್ನು ಸ್ವಸ್ಥವಾಗಿರಿಸುತ್ತದೆ.

* ಕ್ಯಾನ್ಸರ್ ಖಾಯಿಲೆಗೆ ಕ್ಯಾನ್ಸರ್ ಕೋಶಗಳು ದ್ವಿಗುಣಗೊಳ್ಳುವುದನ್ನು ಹಾಗಲಕಾಯಿಯು ತಡೆಗಟ್ಟಬಲ್ಲುದು.


* ಹೆಚ್ಚಾದ ತೂಕವನ್ನು ಕಳೆದುಕೊಳ್ಳಲು ಹಾಗಲಕಾಯಿಯಲ್ಲಿರುವ antioxidant ಗಳು, ನಿಮ್ಮ ಶರೀರದ ಎಲ್ಲಾ ಕಾರ್ಯಾಂಗ ವ್ಯೂಹಗಳನ್ನು ಶುದ್ಧಗೊಳಿಸುತ್ತವೆ. ಇದರಿಂದ ನಿಮ್ಮ ಚಯಾಪಚಯ ಹಾಗೂ ಜೀರ್ಣಾಂಗವ್ಯೂಹಗಳು ಉತ್ತಮಗೊಳ್ಳುತ್ತವೆ ಹಾಗೂ ತನ್ಮೂಲಕ ನೀವು ಹೆಚ್ಚಾದ ನಿಮ್ಮ ಶರೀರದ ತೂಕವನ್ನು ಬೇಗನೆ ನಿವಾರಿಸಿಕೊಳ್ಳುವುದರಲ್ಲಿ ಸಹಕಾರಿಯಾಗಿದೆ.

* ಹಾಗಲ ಲಿವರ್ ಶುದ್ಧೀಕರಿಸುವ ಒಂದು ತರಕಾರಿ. ಇದು ಯಕೃತ್ತನ್ನು ಶುದ್ಧಗೊಳಿಸಲು ಮತ್ತು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಕರಿಸುತ್ತದೆ.

* ಹಾಗಲರಸ ಮಧುಮೇಹ-2 ಅನ್ನು ಹೊಂದಿರುವ ರೋಗಿಗಳಿಗೆ ಒಂದು ಉತ್ತಮ ಔಷಧಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ, ಇನ್ಸುಲಿನ್ ಪ್ರತಿರೋಧವನ್ನು ಗುಣಪಡಿಸುತ್ತದೆ.

* ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ. ಇದು ಪಚನ ಮಟ್ಟವನ್ನು ಹೆಚ್ಚಿಸುವ ಆ್ಯಂಟಿ ಆಕ್ಸಿಡೆಂಟ್‌ಗಳಿಂದಲೂ ಕೂಡಿದೆ. ಇದಲ್ಲದೆ ಹಾಗಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿ.

* ಕಹಿಯಾದ ತರಕಾರಿ ಮತ್ತು ಹಣ್ಣುಗಳು ಬಹುವಾಗಿ ಚರ್ಮಕ್ಕೆ ಪ್ರಯೋದನಕಾರಿ. ಹಾಗಲ ಊರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದಿಂದ ವಿಷಕಾರಿ ಜೀವಾಣುಗಳನ್ನು ತೊಲಗಿಸಲೂ ಸಹಕರಿಸುತ್ತದೆ.

* ನಮ್ಮ ದೇಹವನ್ನು ಶುದ್ಧಿಗೊಳಿಸುವ ಹಾಗಲಕಾಯಿ ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಕೂಡಿದೆ. ಹಾಗಾಗಿ ಈ ತರಕಾರಿ ರೋಗಗಳ ವಿರುದ್ಧ ಹೋರಾಡಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.

* ಮೂತ್ರಕೋಶ ಮತ್ತು ಮೂತ್ರಪಿಂಡಗಳಿಗೆ ಔಷಧಿ. ಹಾಗಲಕಾಯಿ ಕಿಡ್ನಿಗಳನ್ನು ಶುದ್ಧಿಗೊಳಿಸುತ್ತದೆ ಮತ್ತು ಮೂತ್ರ ಕೋಶದಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಹೋಗಲಾಡಿಸಲು ಔಷಧಿಯಾಗಿ ಕೆಲಸ ಮಾಡುತ್ತದೆ.

* ಉಸಿರಾಟದ ತೊಂದರೆಗಳಿಗೆ ಪ್ರಯೋಜನಕಾರಿ. ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ತೀವ್ರ ಉಸಿರಾಟದ ತೊಂದರೆಗಳಾದ ಅಸ್ತಮಾ ಅಥವಾ ಶ್ವಾಸನಾಳಗಳ ಒಳಪೊರೆಯ ಉರಿಯೂತಗಳನ್ನು ಹತೋಟಿಯಲ್ಲಿಡಬಹುದು.

* ಈ ತರಕಾರಿ ಹೇರಳವಾಗಿ ನಾರಿನಂಶ ಹೊಂದಿದ್ದು, ಮಲಬದ್ಧತೆಯನ್ನು ತಡೆಯುತ್ತದೆ.

* ಈ ತರಕಾರಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಆ್ಯಂಟಿಆಕ್ಸಿಡೆಂಟ್‌ಗಳಿದ್ದು, ಕ್ಯಾನ್ಸರ್‌ಕಾರಕ ಜೀವಕೋಶಗಳು ದೇಹದಲ್ಲಿ ಹೆಚ್ಚಾಗುವುದನ್ನು ತಡೆಯುತ್ತದೆ.


* ರಕ್ತದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಹಾಗಲ ಸಹಾಕಾರಿಯಾಗಿದ್ದು, ಇದು ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತವೆ. ಇದರಿಂದ ಹೃದಯ ಆರೋಗ್ಯವಾಗಿರುತ್ತದೆ.



How to Control Diabetes with Bitter Gourd?
Most of the people are looking for holistic and natural approaches to manage and control diabetes. The only natural cure which is getting considerable amount of attention is the usage of bitter gourd juice. It is sometimes known as an ampalaya, it has an acquired taste, buts bitter melon’s effects as an agent helps in controlling diabetes are overwhelming. People who are looking for natural methods to control diabetes can be glad to see the bitter gourd as a powerful alternative treatment for medications.

Firstly select firm bitter gourds with no or few skin blemishes. It must measure about 5 – 12 inches long and must be either in the color of yellow-orange or green. The yellow-orange variety is not that bitter, but it has less powerful properties which lets the juice of bitter melon for controlling diabetes.
Choose an Asian variety which are available from April – September.
You can store bitter melon in a plastic or paper bag. Each bitter gourd must be free from netting or rubber bands. You can store them for about 3 – 5 days.
You must wash the bitter melons in cool water.
Slice them well in such a way that the insides are exposed well.
Use tablespoon to remove the seeds of bitter melon.
Extract juice from bitter gourds by blending them in a juicing machine. You must use 4 – 5 melons to get a glass of juice.
In the morning, drink a small glass of bitter gourd juice with an empty stomach. If it consumed on an empty stomach, the juice accelerate the curative properties and thus controls diabetes.
Bitter melon juice must be continued for a period of 3 – 5 months.
stay healthy..



No comments:

Post a Comment