Friday, April 29, 2011

HEALTH BENEFITS OF TURMERIC ಅರಿಶಿನ


ಸರ್ವಗುಣ ಸಂಪನ್ನ ಅರಿಶಿನ
ಅಡುಗೆಗೆ, ಸೌಂದರ್ಯವರ್ಧನೆಗೆ, ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗುವ ವಿಶೇಷತೆ ಅರಿಶಿನಕ್ಕೆ ಇದೆ. ಹರಿದ್ವರ್ಣವಿರುವುದರಿಂದ ಸಂಸ್ಕೃತದಲ್ಲಿ ಇದಕ್ಕೆ 'ಹರಿದ್ರಾ' ಎನ್ನುತ್ತಾರೆ. ಜೀರ್ಣಶಕ್ತಿ ಹೆಚ್ಚಳಕ್ಕೆ, ಮಧುಮೇಹ ಹತೋಟಿಗೆ, ಅಡುಗೆ ಹಾಗೂ ನಿಮ್ಮ ತ್ವಚೆಯ ಸೌಂದರ್ಯ ವರ್ಧನೆಗೆ ಅರಿಶಿನ ಬೇಕೇ ಬೇಕು.

ಎರಡು ಅಡಿ ಎತ್ತರದ ಅರಿಶಿನ ಗಿಡದ ಎಲೆಗಳು ಉದ್ದವಾಗಿ, ಅಗಲವಾಗಿರುತ್ತದೆ. ಹೂಗಳನ್ನು ಮಳೆಗಾಲದಲ್ಲಿ ನಿರೀಕ್ಷಿಸಬಹುದು. ದಕ್ಷಿಣ ಏಷ್ಯಾದಲ್ಲಿ ಅದರಲ್ಲೂ ದಕ್ಷಿಣ ಭಾರತದ ತಮಿಳುನಾಡಿನ ಈರೋಡು, ಅರಿಶಿನಕ್ಕೆ ಹೆಸರುವಾಸಿಯಾದ ನಗರ.

ಉಪಯೋಗಗಳು:
* ಅರಿಶಿನ ಪುಡಿಯನ್ನು ಎಳ್ಳೆಣ್ಣೆಯಲ್ಲಿ ಕಲೆಸಿ ಹೆಂಗಸರು ಮೈಗೆ ಹಚ್ಚಿ, ಅರ್ಧಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ದುರ್ಗಂಧ, ನವೆ, ಎಗ್ಜಿಮಾ, ಚರ್ಮರೋಗಗಳ ನಿವಾರಣೆಯಾಗಿ ಕಾಂತಿ ವರ್ಧನೆಯಾಗುತ್ತದೆ.

* ಹಾಲಿನ ಕೆನೆಯೊಂದಿಗೆ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

* ಶ್ರೀಗಂಧ, ಅರಿಶಿನ ಹಾಗೂ ಪನ್ನೀರನ್ನು ಅರೆದು ಬರುವ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರಾಗುತ್ತವೆ.

* ಅರಿಶಿನ ಪುಡಿಯೊಂದಿಗೆ, ಬೇವಿನ ಎಲೆಯನ್ನು ಅರೆದು ಚರ್ಮಕ್ಕೆ ಹಚ್ಚುವುದರಿಂದ ಫಂಗಸ್(fungus) ಸೋಂಕು ನಿವಾರಣೆಯಾಗುತ್ತದೆ.

* ಅರಿಶಿನ ಪುಡಿ ಹಾಗೂ ನೆಲ್ಲಿ ಕಾಯಿ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.

* ಅರಿಶಿನ ಕಷಾಯವನ್ನು ಗಾಯಗಳನ್ನು ತೊಳೆಯಲು, ಬಿದ್ದಗಾಯದ ರಕ್ತ ತಡೆಗಟ್ಟಲು ಬಳಸಬಹುದು.

* ಕಾಮಾಲೆ ರೋಗದವರಿಗೆ, ಬೆಳಗ್ಗೆ ಒಂದು ಬಟ್ಟಲು ಗಟ್ಟಿ ಮೊಸರಿನಲ್ಲಿ 10 ಗ್ರಾಂನಷ್ಟು ಅರಿಶಿನ ಪುಡಿಯನ್ನು ಬೆರೆಸಿ ಕೊಡುತ್ತ ಬಂದರೆ ಗುಣಮುಖವಾಗುತ್ತಾರೆ.

* ಬಿಸಿ ಹಾಲಿಗೆ ಚಿಟಿಕೆ ಅರಿಶಿನಪುಡಿ ಬೆರೆಸಿ ಕುಡಿದರೆ ಕೆಮ್ಮು, ನೆಗಡಿ ವಾಸಿಯಾಗುತ್ತದೆ.

ಇವೇ ಅಲ್ಲದೆ ಲ್ಯೂಕೆಮಿಯಾ, ಅಲ್ ಜೈಮರ್ , ಟ್ಯೂಮರ್ , ಕ್ಯಾನ್ಸರ್ ಮುಂತಾದ ಕಾಯಿಲೆ ಚಿಕಿತ್ಸೆಯಲ್ಲೂ ಅರಿಶಿನ ಸಹಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

No comments:

Post a Comment