Saturday, April 23, 2011

ಪುದೀನಾ ಚಟ್ನಿಪುಡಿ PUDINA CHUTNEY PUDI

Bhumika Gk
ಪುದೀನಾ ಚಟ್ನಿಪುಡಿ
ಬೇಕಾಗುವ ಪದಾರ್ಥಗಳು
ಎರಟು ಕಟ್ಟು ಪುದೀನಾ, ಒಂದು ಕಪ್ ಕಡಲೆಬೇಳೆ,ಒಂದು ಕಪ್ ಉದ್ದಿನಬೇಳೆ,ಒಂದು ಕಪ್ ಒಣಕೊಬ್ಬರಿ ತುರಿ
ಒಂದು ಕಪ್ ಕೆಂಪ್ ಮೆಣ್ಸಿನ್ ಕಾಯಿ,ರುಚಿಗೆ ತಕ್ಕಷ್ಟು ಉಪ್ಪ ,ರುಚಿಗೆ ತಕ್ಕಷ್ಟು ಹುಣಿಸೆಹಣ್ಣಿನ ಪೇಸ್ಟ್
ಸಣ್ಣ ತುಂಡು ಬೆಲ್ಲ ,ಇಷ್ಟ ಪಟ್ಟರೆ ಚಿಟಿಕೆ ಇಂಗು

ತಯಾರಿಸುವ ವಿಧಾನ

ಪುದೀನಾ ಸೊಪ್ಪಿನ ಎಲೆಗಳನ್ನು ಬಿಡಿಸಿ ಬಿಸಿಲಲ್ಲಿ ಇಡಬೇಕು. ಚೆನ್ನಾಗಿ ಒಣಗಿದ ಎಲೆಗಳು ನೋಡುವುದಕ್ಕೆ ಕಪ್ಪಾಗಿ ಕಂಡರೂ ಗರಿಗರಿಯಾಗಿರುತ್ತವೆ. ಬೇಳೆಗಳು, ಕೊಬ್ಬರಿ, ಮೆಣಸಿನಕಾಯಿಯನ್ನು ಚೂರು ಎಣ್ಣೆ ಹಾಕಿಕೊಂಡು ಒಂದೊಂದನ್ನೂ ಪ್ರತ್ಯೇಕವಾಗಿ (seperate) ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.

ಹುರಿದ ಪದಾರ್ಥಗಳನ್ನು ಒಂದೊಂದಾಗಿ ಮಿಕ್ಸಿಗೆ ಹಾಕುತ್ತಾ ಬರಬೇಕು. ಮೊದಲು ಕಡಲೆಬೇಳೆಯನ್ನು ಪುಡಿಮಾಡಿ ತಟ್ಟೆಗೆ ಹಾಕಿಕೊಳ್ಳಿ. ನಂತರ ಉದ್ದಿನಬೇಳೆ ಹಾಕಿ ರುಬ್ಬಿ ಸಣ್ಣಗೆ ಪುಡಿಯಾದ ನಂತರ ತೆಗೆದು ತಟ್ಟೆಗೆ ಹಾಕಿ. ಆನಂತರದಲ್ಲಿ ಮೆಣಸಿನಕಾಯಿ ಪ್ಲಸ್ ಉಪ್ಪು ಪ್ಲಸ್ ಹುಣಿಸೆ ಪೇಸ್ಟನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಮಿಕ್ಸಿಯಿಂದ ತೆಗೆದು ತಟ್ಟೆಗೆ ಹಾಕಿ.

ಕೊನೆಗೆ ಕೊಬ್ಬರಿ ಪ್ಲಸ್ ಪುದೀನಾ ಎಲೆಗಳನ್ನು ಹಾಕಿ ರುಬ್ಬಿಕೊಂಡು ಹೊರತೆಗೆಯಿರಿ. ಮೇಲೆ ಹೇಳಿದ ಯಾವುದೇ ಪದಾರ್ಥಗಳು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಹಿಟ್ಟಿನಂತಾಗಬಾರದು. ಅಂತಿಮವಾಗಿ ಎಲ್ಲಾ ಪದಾರ್ಥಗಳನ್ನು ಕೈಯಲ್ಲಿ ಅಥವಾ ಸೌಟಿನಲ್ಲಿ ಚೆನ್ನಾಗಿ ಕಲಸಿಡಬೇಕು. ಸ್ವಲ್ಪ ಬಾಯಿಗೆ ಹಾಕಿಕೊಂಡು ಉಪ್ಪು ಖಾರಾ ಪರೀಕ್ಷೆ ಮಾಡಿ. ಅಗತ್ಯ ಎನಿಸಿದರೆ ಉಪ್ಪು ಅಥವಾ ಬೆಲ್ಲ ಸೇರಿಸಿ ಮತ್ತೆ ಪುಡಿಮಾಡಿ ಬೆರೆಸಿರಿ.

ನಾನಾ ಬಗೆಯ ಸೊಪ್ಪಿನ ಎಲೆಗಳನ್ನು ಬಳಸಿ ಇದೇ ವಿಧಾನ ಅನುಸರಿಸಿ ಚಟ್ನಿಪುಡಿ ಮಾಡಬಹುದು. ಸಾಮಾನ್ಯವಾಗಿ ಕರಿಬೇವಿನ ಚಟ್ನಿಪುಡಿಯನ್ನು ಬಹಳಷ್ಟು ಜನ ಮಾಡುತ್ತಾರೆ. ನೀವು ಪುದೀನ ಅಥವಾ ಒಣಗಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಾಡಿಕೊಳ್ಳಬಹುದು

No comments:

Post a Comment