Saturday, April 23, 2011

ಮಾವಿನಕಾಯಿ ಗೊಜ್ಜು MAVINAKAYI GOJJU ( MANGO)

Bhumika Gk
ಬೇಕಾಗುವ ಪದಾರ್ಥಗಳು
ಹಸಿರು ಮಾವಿನಕಾಯಿ ಹೆರಕಲು 1 ಕಪ್, ಬೇವಿನ ಹೂವುಗಳು 2 ಚಮಚ,ಬೆಲ್ಲ 3 ಚಮಚ
ಸಾಸಿವೆ ಕಾಳು ಅರ್ಧ ಚಮಚ ,ಉದ್ದಿನಬೇಳೆ, ಕಡಲೆಬೇಳೆ ಕಾಲು ಚಮಚ,ಹಸಿಮೆಣಸಿನಕಾಯಿ 2 ಅಥವಾ ಖಾರದ ಪುಡಿ,ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
* ಸ್ವಲ್ಪ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಅದಕ್ಕೆ ಸಾಸಿವೆ, ಬೇಳೆಕಾಳು, ಮೆಣಸಿನಕಾಯಿ, ಇಂಗು ಹಾಕಿ ಎರಡು ನಿಮಿಷ ತಾಳಿಸಿ.
* ಅದಕ್ಕೆ ಸ್ವಲ್ಪ ನೀರು ಬೆರೆಸಿ ಮಾವಿನಕಾಯಿ ಹೆರಕಲನ್ನು ಹಾಕಿ ಹತ್ತು ನಿಮಿಷದಷ್ಟು ಕುದಿಸಿಕೊಳ್ಳಿ.
* ಕುದಿಸಿಕೊಂಡ ಮಾವಿನಕಾಯಿಗೆ ಉಪ್ಪು, ಬೇವುಬೆಲ್ಲ ಹಾಕಿ ಮತ್ತೆ ಐದು ನಿಮಿಷಗಳ ಕಾಲ ಕುದಿಸಿರಿ.
* ಸೂಪರ್ ಸ್ಪೈಸಿ ಮಾವಿನಕಾಯಿ ಗೊಜ್ಜು ತಯಾರ್. ಸಿಹಿ ಜಾಸ್ತಿ ಬೇಕಿದ್ದರೆ ಒಂದು ಕರಣೆ ಬೆಲ್ಲ ಹೆಚ್ಚು ಹಾಕಿ. ಇದನ್ನು ಬಿಸಿಬಿಸಿ ಅನ್ನದ ಜೊತೆ ತುಪ್ಪ ಬೆರೆಸಿಕೊಂಡು ಹೊಟ್ಟೆಗಿಳಿಸಿ.

No comments:

Post a Comment