Monday, February 28, 2011

ಕಾಳು ಮೆಣಸು-ಜೀರಿಗೆ ಸಾರು


ಕಾಳು ಮೆಣಸು : ಅರ್ಧ ಚಮಚ
ಜೀರಿಗೆ:ಒಂದು ಚಮಚ
ಬೆಲ್ಲದ ಪುಡಿ : ಒಂದು ಚಮಚ
ಬೆಳ್ಳುಳ್ಳಿ ಎಸಳು :೪
ಅರಸಿನ :ಕಾಲು ಚಮಚ
ಸಾಸಿವೆ :ಒಂದು ಚಮಚ
ತುಪ್ಪ :ಒಂದು ಚಮಚ
ಉಪ್ಪು:ರುಚಿಗೆ ತಕ್ಕಷ್ಟು
ಹುಣಸೆ ಹುಳಿ: ನಿಂಬೆ ಗಾತ್ರದಷ್ಟು
ಬೇವಿನೆಲೆ :ಹತ್ತು ಎಸಳು
ಇಂಗು:ಚಿಟಿಕೆ

ವಿಧಾನ :

ಮೊದಲಿಗೆ ಜೀರಿಗೆ ಮತ್ತು ಕಾಳು ಮೆಣಸನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ಹುಣಸೆ ಹಣ್ಣನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಇಟ್ಟು, ಬಳಿಕ ಅದನ್ನು ಹಿಂಡಿ ರಸ ಬೇರ್ಪಡಿಸಿ ಇಟ್ಟುಕೊಳ್ಳಿ.

ನಾಲ್ಕು ಲೋಟ ನೀರು ಬಿಸಿ ಮಾಡಿ ಅದರಲ್ಲಿ ಜೀರಿಗೆ,ಕಾಳು ಮೆಣಸಿನ ಪುಡಿ,ಹುಣಸೆ ರಸ ,ಬೆಲ್ಲ ಹಾಕಿ ಕುದಿಸಿ.

ಒಗ್ಗರಣೆ ಸೌಟಿನಲ್ಲಿ ತುಪ್ಪ, ಸಾಸಿವೆ,ಅರಸಿನ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಇಂಗು, ಬೇವಿನೆಲೆ ಹಾಕಿ ಕಲಕಿ, ಕುದಿಯುತ್ತಿರುವ ಕಾಳು ಮೆಣಸು, ಜೀರಿಗೆ ನೀರಿಗೆ ಹಾಕಿ.

ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲಕಿ.ಇನ್ನೂ ಎರಡು ನಿಮಿಷ ಕುದಿಸಿ,ಒಲೆ ಆರಿಸಿ.

ಇದೀಗ ನೋಡಿ ,ನಾಲಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸು-ಜೀರಿಗೆ ಸಾರು ತಯಾರಾಯಿತು. ಇನ್ನೇಕೆ ತಡ, ಬಿಸಿ ಬಿಸಿ ಅನ್ನಕ್ಕೆ ಕಲಕಿ ತಿನ್ನುವುದೊಂದೇ ಬಾಕಿ!!ಕಾಳು ಮೆಣಸು,ಜೀರಿಗೆ ಕೆಮ್ಮು,ಕಫಕ್ಕೆ ಅತ್ಯುತ್ತಮ ಔಷಧಿ

"ಹಿತ್ತಲ ಮದ್ದು ಗ್ರೂಪ್ ನಲ್ಲಿ ಅರ್ಚನಾ ಹೆಬ್ಬಾರ್ ರವರು ಹಾಕಿದ್ದು "

No comments:

Post a Comment